ನಾನುಇಂದಿರಾನಮ್ಮಸಮುದಾಯದಮಕ್ಕಳವಿಧ್ಯಾಬ್ಯಾಸದಬಗ್ಗೆನಾನುಕಂಡಬದಲಾವಣೆಹೇಳಲುನಾನುಬಯಸುತ್ತೇನೆ
2011 ರಿಂದ 2021ರವರೆಗೆ ನಮ್ಮ ಕಾಗದ ಆಯುವವರ ಸಮುದಾಯದ ಮಕ್ಕಳ ವಿಧ್ಯಾಬ್ಯಾಸಕ್ಕೆ ಸಂಬಂದಿಸಿದ ಪ್ರಗತಿಯನ್ನು ನಾವು ಈಕೆಳಗಿನ ಪುಟದಲ್ಲಿ ನೋಡಬಹುದು.
ಪ್ರಾರಂಭದ ಹಂತದಲ್ಲಿ ಮಕ್ಕಳ ಸಮಸ್ಯೆಗಳು ಈ ಕೆಳಕಂಡಂತಿದ್ದವು.
ನಮ್ಮ ಕಾಗದ ಆಯುವವರ ಮಕ್ಕಳು 2011 ರಲ್ಲಿ ಶಾಲೆಗೆ ನಿರಂತರವಾಗಿ ಹೋಗುತ್ತಿರಲಿಲ್ಲ ಕಾರಣ ಹಲವಾರು ನಾವು ತಾಯಂದಿರು ಮುಂಜಾನೆ ಎಲ್ಲರೂ ಏದ್ದೇಳುವ ಮೊದಲೆ ಕಾಗದ ಆಯುಲು ಹೋಗುತ್ತಿದೇವು , ತಂದೆ ಜವಾಬ್ದಾರಿ ರಹಿತನಾಗಿ ಇರುತ್ತಿದ್ದನು. ನಾವು ತಾಯಂದಿರು ತಿರುಗಿ ಮನೆಗೆ ಬರುವಷ್ಟರಲ್ಲಿ ಶಾಲೆಗೆ ಹೋಗುವ ಸಮಯ ಮೀರುತ್ತಿತ್ತು, ಕೆಲವರು ಮಕ್ಕಳನ್ನು ಎಲ್ಲರಂತೆ ಆಂಗ್ಲ ಮಾಧ್ಯಮದಲ್ಲಿ ವಿಧ್ಯಾಬ್ಯಾಸ ಮಾಡಿಸಲು ಶಾಲೆಗೆ ದಾಖಲಿಸುತ್ತಿದ್ದರು, ಅರ್ಧ ಹಣವನ್ನು ಶಾಲಾ ಶುಲ್ಕವಾಗಿ ಭರೆಸುತ್ತಿದ್ದರು, ಉಳಿದ ಹಣವನ್ನು ಭರಿಸಲಾಗುತ್ತಿರಲಿಲ್ಲ, ಕೆಲವರಿಗೆ ಮಕ್ಕಳ ವಿಧ್ಯಾಭ್ಯಾಸಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕೆಂಬ ಅರಿವು ಇರಲಿಲ್ಲ, ಇನ್ನೂ ಕೆಲವು ಮನೆಗಳಲ್ಲಿ ಹಿರಿಯರು ಮಕ್ಕಳಿಗೆ ಮದುವೆ ಒಂದನ್ನು ಬಿಟ್ಟು ಬೇರೆ ಆಲೋಚನೆಗಳು ಇರದ ಕಾರಣ ಮಕ್ಕಳ ಮದುವೆಗೆ ಒತ್ತಾಯಿಸುವುದು ಈ ಒತ್ತಡಗಳ ಮಧ್ಯ ನಮ್ಮ ಮಹಿಳಾ ಕಾಗದ ಆಯುವವರಿಗೆ ಅವರ ಕುಟುಂಭದವರ ಹೊಟ್ಟೆ ತುಂಬಿಸುವುದು ಮತ್ತು ಗಂಡನ ಕುಡಿತಕ್ಕೆ ಹಣ ನೀಡುವುದು, ಆಗ ತಾನೆ ತ್ಯಾಜ್ಯ ನಿರ್ವಹಣೆ ಬಗ್ಗೆ ಬಿ.ಬಿ.ಎಂ.ಪಿ. ಯ ಒಣ ತ್ಯಾಜ್ಯ ಬೇರ್ಪಡಿಸುವ ಬಗ್ಗೆ ಕಾರ್ಯನಿರ್ವಹಿಸಲು ಆರಂಬಿಸಿತ್ತು ಹಾಗಾಗಿ ಕಾಗದ ಆಯುವವರಿಗೆ ರಸ್ತೆ ಬದಿಯಲ್ಲಿ ಒಣ ತ್ಯಾಜ್ಯ ಸಿಗುವುದು ಕಡಿಮೆಯಾಗಿತ್ತು, ಈ ಸಮಸ್ಯೆಗಳಲ್ಲಿ ನಮ್ಮ ಮಕ್ಕಳ ವಿಧ್ಯಾಭ್ಯಾಸದ ನಿಜಕ್ಕೂ ಸವಾಲೇ ಸರಿ.
ನಮ್ಮ ಸಮುದಾಯದ ಮುಖ್ಯ ಸವಾಲು 14 ರಿಂದ 18 ರ ವಯಸ್ಸಿನ ಮಕ್ಕಳ
ಬಾಲ್ಯ ವಿವಾಹಗಳು ಮತ್ತು ಮಕ್ಕಳ ಪ್ರೇಮವಿವಾಹಗಳು, ಗಂಡುಮಕ್ಕಳು ಮಾದಕ ವಸ್ತುಗಳಾದ ದೂಮಪಾನ, ಮಧ್ಯಪಾನಗಳನ್ನು ಸೇವಿಸುತ್ತಾ ಇದ್ದರು, 2011 ರಲ್ಲಿ ಹಸಿರು ದಳ ಸಂಸ್ಥೆಯು ನಮ್ಮ ಕಾಗದ ಆಯುವವರನ್ನು ಸಂಘಟಿಸುವುದು, ಅವರ ಅಭಿವೃದ್ದಿಯ ದೃಷ್ಠಿಯನ್ನು ಹೊತ್ತು ನಮ್ಮ ಕಾಗದ ಆಯುವವರ ಸಮುದಾಯಕ್ಕೆ ಕಾಲಿಟ್ಟಿತ್ತು, ಕಾಗದ ಆಯುವವರಿಗಾಗಿ ಬೇರೆ ಕಾರ್ಯಗಳನ್ನು ಮತ್ತು ಯೋಜನೆಳನ್ನು ರೂಪಿಸುವುದರಲ್ಲಿ ನಾವು ಅವರೊಡನೆ ನಿದಾನವಾಗಿ ಸಹಕರಿಸಲು ತೊಡಗಿಸಿಕೊಂಡೆವು. ಒಂದು ಕಡೆ ಮಕ್ಕಳ ಭವಿಷ್ಯದ ಬಗ್ಗೆ ಕೂಡ ನಾವು ಹಲವಾರು ಯೋಜನೆಗಳನ್ನು ಸಂಸ್ಥೆಯ ಒಳಗೆ ನಮ್ಮ ಕಾಗದ ಆಯುವವರ ಜೊತೆ ಚರ್ಚಿಸುತ್ತಾ ಬಂದರು. ನಿದಾನವಾಗಿ ಮಕ್ಕಳ ವಿಷಯವನ್ನು ಚರ್ಚಿಸಲು ಪ್ರಾರಂಭಿಸಿದೆವು. ಸಂಸ್ಥೆಯಲ್ಲಿ ಆಗ ತಾನೆ ಮಕ್ಕಳಿಗೆ ಸಂಬಂದಪಟ್ಟ ಹಾಗೆ ಸಹಾಯ ಮಾಡಲು ದಾನಿಗಳ ಮುಖಾಂತರ ಒಂದು ವಿಧ್ಯಾಬ್ಯಾಸಕ್ಕೆ ಸಂಬಂದಿಸಿದ ಹಾಗೆ ಯೋಜನೆಯನ್ನು ಆರಂಬಿಸಿದವು 8 ನೇ ತರಗತಿಗೆ ದಾಖಲಾಗುವ ಹೆಣ್ಣು ಮಕ್ಕಳಿಗೆ ಶಾಲಾ ಶುಲ್ಕವನ್ನು ಸಂಸ್ಥೆಯ ನಿಯಮದ ಅಡಿಯಲ್ಲಿ ಕೊಡಲು ಪ್ರಾರಂಬಿಸಿದರು. ನಾವೆಲ್ಲ ಗಮನಿಸಿದ ಹಾಗೆ ಆ ವರ್ಷದಿಂದ ಹಂತ ಹಂತವಾಗಿ ಮಕ್ಕಳನ್ನು ಪಾಲಕರು ಶಾಲೆ ಬಿಡಿಸುವುದು ಕಡಿಮೆಯಾಗುತ್ತಾ ಬಂದಿತು. ಮುಂದಿನ ದಿನಗಳಲ್ಲಿ ಸಮುದಾಯ ಗ್ರಂಥಾಲಯ ಬುಗುರಿಯನ್ನು ಆರಂಬಿಸಿದರು ಇದರಿಂದಾಗಿ ಮಕ್ಕಳನ್ನು ಕೇಂದ್ರಿಕರಿಸಿವುದು ಮಕ್ಕಳನ್ನು ಗುರುತಿಸುವುದರಲ್ಲಿ ಇನ್ನೂ ಒಂದು ಹೆಜ್ಜೆ ಮುಂದುವರೆದಂತಾಯಿತು.
2015-2016 ನೇ ಸಾಲಿನಲ್ಲಿ ನಮ್ಮ ಕಾರ್ಯಕ್ಷೇತ್ರದಲ್ಲಿ ಒಂದು ಮಗುವೂ ಸಹ ಕಾಲೇಜು ಶಿಕ್ಷಣಕ್ಕೆ ಹೋಗಿರಲಿಲ್ಲ 2016 ರಲ್ಲಿ ಮೊದಲಿಗೆ ಭವಾನಿ ಮತ್ತು ಶರಣ್ಯ ಎಂಬ ಬಾಲಕಿ ತಮಿಳುನಾಡಿನಲ್ಲಿ 10 ನೇ ತರಗತಿ ಮುಗಿಸಿ 2016 ರಲ್ಲಿ ಬೆಂಗಳೂರಿಗೆ ಬಂದು ಹಸಿರು ದಳದ ಸಹಾಯದಿಂದ ವಿಧ್ಯಾರ್ಥಿನಿಲಯದಲ್ಲಿ ಉಳಿದುಕೊಂಡು ಶಿಕ್ಷಣವನ್ನು ಮುಂದುವರೆಸಿದರು. ಶರಣ್ಯ ಬ.ಇ. ಮುಗಿಸಿ ಐ.ಏ.ಎಸ್. ಪರೀಕ್ಷೆ ಬರೆಯಲು ತರಬೇತಿಗೆ ದಾಖಲಾಗಿದ್ದಾಳೆ. ಕಳೆದ ವರ್ಷ ಸಂಸ್ಥೆಯ ನಿಯಮದ ಅಡಿಯಲ್ಲಿ ಬರುವ 2019-20 ರ ಸಾಲಿನಲ್ಲಿ 45 ಮಕ್ಕಳಿಗೆ ವಿಧ್ಯಾರ್ಥಿವೇತನವನ್ನು ಕೊಡಲಾಯಿತು. ಇದರಲ್ಲಿ ಶೇಕಡಾ 70% ರಷ್ಟು ಹೆಣ್ಣು ಮಕ್ಕಳು ಶೇಕಡಾ 30% ರಷ್ಟು ಬಾಗ ಗಂಡು ಮಕ್ಕಳಿಗೆ ನಮಗೆ ಇರುವ ಸಂಪನ್ಮೂಲವನ್ನು ಒದಗಿಸುತ್ತಾ ಬಂದಿದ್ದೇವೆ. ಹೆಚ್ಚು ಹೆಣ್ಣು ಮಕ್ಕಳಿಗೆ ಪ್ರಾದಾನ್ಯತೆ ನೀಡಲಾಗುತ್ತಿದೆ. ಒಂಟಿ ಪೋಷಕರು ಮತ್ತು ಉತ್ತಮವಾಗಿ ಅಂಕ ಪಡೆಯುತ್ತಿರುವ ಗಂಡು ಮಕ್ಕಳಿಗೂ ವಿಧ್ಯಾರ್ಥಿವೇತನವನ್ನು ನೀಡಲಾಗುತ್ತಿದೆ. ಈ ಎಲ್ಲದರ ಪಲಿತಾಂಶವಾಗಿ 2021-22 ರ ಸಾಲಿನಲ್ಲಿ ಇತರೆ ಒಂದು ಸಂಸ್ಥೆ ಪದವಿ ಶಿಕ್ಷಣ ಪಡೆಯುತ್ತಿರುವ ಹೆಣ್ಣು ಮಕ್ಕಳಿಗೆ ವಿಧ್ಯಾರ್ಥಿವೇತನವನ್ನು ನೀಡಲು ಮುಂದೆ ಬಂದು ಸಹಾಯ ಮಾಡುತ್ತಿದೆ. ಒಟ್ಟು 17 ಹೆಣ್ಣು ಮಕ್ಕಳ ಪಟ್ಟಿಯನ್ನು ಇತರೆ ಸಂಸ್ಥೆಗಳಿಗೆ ನೀಡಲಾಗಿದ್ದು, ಇದರಿಂದ ಅವರ ಪದವಿ ಶಿಕ್ಷಣಕ್ಕೆ ನೆರವಾಗುತ್ತಿದೆ. ನಮ್ಮಲ್ಲಿ ಕಾಗದ ಆಯುವವರ ಮಕ್ಕಳು ಸಿಬ್ಬಂದಿಗಳಾಗಿ ಕಾರ್ಯನಿರ್ವಹಣೆಯನ್ನು ಇಲ್ಲಿ ನೋಡಬಹುದಾಗಿದೆ. ಹಸಿರು ದಳ ಸಂಸ್ಥೆಯು ವಿವಿಧ ವಿಭಾಗಗಳಲ್ಲಿ ಸಾಮಾಜಿಕ ಭದ್ರತಾ ತಂಡ, ಒಣ ತ್ಯಾಜ್ಯ ಪುನರ್ ಸ್ಥಾಪನಾ ಘಟಕ ಮತ್ತು ವಸತಿಯೋಜನೆ, ಒಣತ್ಯಾಜ್ಯ ಸಂಗ್ರಹಣಾ ಕೇಂದ್ರಗಳ ತಂಡ ಈ ರೀತಿ ಹಸಿರು ದಳದ ವಿವಿಧ ವಿಭಾಗಗಳಲ್ಲಿ ಇವರಿಗೆ ಉದ್ಯೋಗ ಒದಗಿಸುವಲ್ಲಿ ಹಸಿರು ದಳ ತೆರೆದ ಅವಕಾಶಗಳನ್ನು ನೀಡಿ ಸದಾ ಇವರ ಹಿತಕ್ಕಾಗಿ ಶ್ರಮಿಸುತ್ತದೆ.
ಬೆಂಗಳೂರು ಅಲ್ಲದೆ ಇತರೆ ಜಿಲ್ಲೆಗಳಲ್ಲೂ ಹಸಿರು ದಳ ಕಾರ್ಯನಿರ್ವಹಿಸುತ್ತಿದ್ದು, 2022 ರಲ್ಲಿ 10 ನೇ ತರಗತಿಯಲ್ಲಿ 61 ಮಕ್ಕಳು ತೇರ್ಗಡೆಯನ್ನು ಹೊಂದಿದ್ದಾರೆ ಇದು ನಮಗೆ ಹೆಮ್ಮೆಯ ವಿಷಯವಾಗಿದೆ. ಕಾಗದ ಆಯುವವರ ಸಮುದಾಯದ ಮಕ್ಕಳು 2011 ರಲ್ಲಿ ತಂದೆ ತಾಯಿ ಜೊತೆ ತ್ಯಾಜ್ಯ ನಿರ್ವಹಣೆ ಮಾಡುತ್ತಾ ಚೀಲ ಹಿಡಿದು ಓಡಾಡುತ್ತಾ ಹಸಿರು ದಳ ದ ಸಿಬ್ಬಂದಿಯನ್ನು ನೋಡಿ ನಮ್ಮನ್ನು ಶಾಲೆಗೆ ಕಳಿಸುತ್ತಾರೆ ಎಂದು ಕದ್ದು ಮುಚ್ಚಿ ಬಚ್ಚಿಟ್ಟುಕೊಳ್ಳುವಂತವರು, ವಿಧ್ಯಾಬ್ಯಾಸದಲ್ಲಿ ಆಸಕ್ತಿ ಇಲ್ಲದೆ ಮನೆಕೆಲಸಕ್ಕೆ ಹೋಗುತ್ತಿದ್ದ ಮಕ್ಕಳು ವಾಪಸ್ಸು ಬಂದು ಒಂದೆ ಬಾರಿಗೆ ಹತ್ತನೇ ತರಗತಿ ತೇರ್ಗಡೆ ಹೊಂದಿ ಕಾಲೇಜಿಗೆ ಹೋಗುತ್ತಿರುವುದು ಕಂಡಾಗ ನನಗೆ ತುಂಬಾ ಸಂತೋಷ ತಂದು ಕೊಡುವ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಭರವಸೆಯ ಬೆಳಕನ್ನು ಮೂಡಿಸಿರುತ್ತಾರೆ.